RSS ಮತ್ತು ಬಿಜೆಪಿಯನ್ನು ಸೈದ್ಧಾಂತಿಕವಾಗಿ ಎದುರಿಸಲು ಪ್ರಾದೇಶಿಕ ಪಕ್ಷಗಳಿಗೆ ಸಾಧ್ಯವಿಲ್ಲ. ಕಾಂಗ್ರೆಸ್‍ಗೆ ಮಾತ್ರ ಆ ಶಕ್ತಿ ಇದೆ ಎಂಬ ರಾಹುಲ್ ಗಾಂಧಿ ಮಾತು ಪ್ರಾದೇಶಿಕ ಪಕ್ಷಗಳ ಕೋಪಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮಿತ್ರಪಕ್ಷಗಳಾದ ಜೆಎಂಎಂ, ಆರ್‍ಜೆಡಿ ಖಾರವಾಗಿ ತಿರುಗೇಟು ನೀಡಿದೆ. ಅದು ಹೋರಾಟಕ್ಕಾದರೂ ಸರಿ, ಗೆಲ್ಲುವುದಕ್ಕಾದರೂ ಸರಿ.. ಕಾಂಗ್ರೆಸ್ ಪಕ್ಷ ಈ ಪ್ರಾದೇಶಿಕ ಪಕ್ಷಗಳನ್ನೇ ಅವಲಂಭಿಸಿದೆ ಅನ್ನೋದನ್ನು ಮರೆಯಬಾರದು ಅಂತ ಜೆಎಂಎಂ ತಿರುಗೇಟು ಕೊಟ್ಟಿದೆ. ಆರ್‍ಜೆಪಿ ಮುಖಂಡರು ಕೂಡ ರಾಹುಲ್ ಗಾಂಧಿ ಹೇಳಿಕೆ ದುರದೃಷ್ಟಕರ ಎಂದಿದೆ. ಸಹ ಪ್ರಯಾಣಿಕ ಎಂಬ ಭಾವನೆಗೆ ಕಾಂಗ್ರೆಸ್ ಬರಬೇಕು ಎಂದು ಸಲಹೆ ನೀಡಿದೆ. ಎಎಪಿ, ಅಕಾಲಿ ದಳ ಕೂಡ ರಾಹುಲ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿವೆ.
#HRRanganath #NewsCafe #PublicTV #RahulGandhi